ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಒಳ್ಳೆ ಹುಡುಗ ಪ್ರಥಮ್ | Filmibeat Kannada

2017-11-30 93

ಮೈಸೂರು, ನವೆಂಬರ್ 29 : ನಿಮ್ಮ ಸೈದ್ಧಾಂತಿಕ ನಿಲುವು ನನಗೆ ಇಷ್ಟವಾಗಲ್ಲ ಕಣ್ರೀ... ನಾನು ಇದನ್ನು ಖಂಡಿಸ್ತೀನಿ, ಪ್ರತಿಭಟಿಸುತ್ತೀನಿ ಎನ್ನುವ ಮಾತು ಕೇಳಿದಾಗಲೆಲ್ಲ ನಮಗೆ ಥಟ್ಟೆಂದು ನೆನಪಾಗೋದು 'ಒಳ್ಳೆ ಹುಡುಗ' ಪ್ರಥಮ್. ಅಪ್ಪ -ಅಮ್ಮ ಇಟ್ಟಿರುವ ಹೆಸರಿನೊಂದಿಗೆ 'ಒಳ್ಳೆ ಹುಡುಗ' ಎನ್ನುವ ಅನುವಾಚಕಪದವನ್ನು ಸೇರಿಸಿಕೊಂಡಿರುವ ಕನ್ನಡಪರ ಹೋರಾಟಗಾರ 'ಬಿಗ್ ಬಾಸ್' ಪ್ರಥಮ್ ರಾಜಕೀಯಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ. ತೊಡೆ ಕಚ್ಚಿದ್ದ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಗೆ ಜಾಮೀನು ಯಾವ ಪಕ್ಷದಿಂದ ಪ್ರಥಮ್ ಸ್ಪರ್ಧಿಸಲಿದ್ದಾರೆ, ಯಾವ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛಿಸಿದ್ದಾರೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್! ಆದರೆ, ಅವರು ವಿಧಾನಸಭೆ ಚುನಾವಣೆಗೆ ಧುಮುಕುತ್ತಿರುವುದಂತೂ ಸತ್ಯ.ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗುವ ಮುನ್ನ ಪ್ರಥಮ್ ಅವರು ಎಲ್ಲ ರಾಜಕೀಯ ನಾಯಕರೊಂದಿಗೆ ಫೋಟೋ ತೆಗೆಸಿಕೊಂಡಿದ್ದರು. ಬಿಗ್ ಬಾಸ್ ಗೆದ್ದ ನಂತರವೂ ಹಲವಾರು ನಾಯಕರೊಂದಿಗೆ ಕಾಣಿಸಿಕೊಂಡಿದ್ದಾರೆ. ಆದರೆ, ಯಾರೊಂದಿಗೂ ಗುರುತಿಸಿಕೊಂಡಿಲ್ಲ ಎನ್ನುವುದು ಅವರ ನುಡಿ. ಈ ಕುರಿತಾಗಿ ಖುದ್ದು ಪ್ರಥಮ್ ರವರೇ 'ಒನ್ಇಂಡಿಯಾ ಕನ್ನಡ'ಕ್ಕೆ ಸಂದರ್ಶನ ನೀಡಿದ್ದಾರೆ. ಸಂದರ್ಶನದಲ್ಲಿ ರಾಜಕೀಯ ಸೇರುವ ಆಶಯ, ಮುಂದಿನ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ.


BigBoss star celebrity Olle Hudga Pratham confirms that he is contesting elections. but he refuses to say from witch party he is going to contest.

Videos similaires